ದೀಪಿಕಾ ಪಡುಕೋಣೆ, ಬಾಲಿವುಡ್ ನಟಿಗೆ ಪದ್ಮಾವತಿ ಸಿನಿಮಾ ವಿಚಾರವಾಗಿ ಜೀವ ಬೆದರಿಕೆ | FIlmibeat Kannada

2017-11-18 351

ದೀಪಿಕಾ ಪಡುಕೋಣೆ ತಲೆ ಕತ್ತರಿಸಿದ್ರೆ 5 ಕೋಟಿ ಬಹುಮಾನ. 'ಪದ್ಮಾವತಿ' ಸಿನಿಮಾ ಬಿಡುಗಡೆಯಾದ್ರೆ ದೀಪಿಕಾ ಪಡುಕೋಣೆಯ ಮೂಗು ಕತ್ತರಿಸುತ್ತೇವೆ ಎಂದು ರಜಪೂತ ಕರಣಿ ಸೇನೆ ಸದಸ್ಯರು ಬೆದರಿಕೆಯೊಡ್ಡಿದ ಬೆನ್ನಲ್ಲೆ ಈಗ ಉತ್ತರ ಪ್ರದೇಶದ ಕ್ಷತ್ರಿಯ ಸಮಾಜ ದೀಪಿಕಾ ಹಾಗೂ ಸಂಜಯ್ ಲೀಲಾ ಬನ್ಸಾಲಿ ತಲೆ ಕತ್ತರಿಸಿ ತಂದವರಿಗೆ 5 ಕೋಟಿ ಬಹುಮಾನ ಘೋಷಿಸಿದೆ. 'ಪದ್ಮಾವತಿ' ವಿವಾದಕ್ಕೆ ಸಂಬಂಧಪಟ್ಟಂತೆ ಕ್ಷತ್ರಿಯ ಸಮಾಜದ ಕಾರ್ಯಕರ್ತ ಹಾಗೂ ಸಮಾಜವಾದಿ ಪಕ್ಷದ ಮುಖಂಡ ಠಾಕೂರ್ ಅಭಿಷೇಕ್ ಸೋಮ್, ದೀಪಿಕಾ ಹಾಗೂ ಸಂಜಯ್ ರುಂಡ ಕತ್ತರಿಸುವವರಿಗೆ 5 ಕೋಟಿ ರೂ. ನೀಡುವುದಾಗಿ ಘೋಷಣೆ ಮಾಡಿದ್ದು, ಅನಾಹುತವಾಗುವ ಮೊದಲು ದೇಶ ಬಿಟ್ಟು ತೆರಳುವಂತೆ ದೀಪಿಕಾಗೆ ಬೆದರಿಕೆ ಹಾಕಿದ್ದಾರೆ. ಈ ಹಿನ್ನೆಲೆಯಲ್ಲಿ ನಟಿ ದೀಪಿಕಾ ಅವರಿಗೆ ಮುಂಬೈನ ಪೊಲೀಸರು ಭದ್ರತೆ ಹೆಚ್ಚಿಸಿದ್ದಾರೆ. ದೀಪಿಕಾ ಹಾಗೂ ನಿರ್ದೇಶಕರ ಮನೆ ಹಾಗೂ ಕಛೇರಿಗಳಿಗೆ ಪೊಲೀಸ್ ಭದ್ರತೆ ನೀಡಿದ್ದಾರೆ.

Mumbai Police Increase Deepika Padukone's Security After Rajput Karni Sena's Threat!


Videos similaires